ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನ ಕಲೆಯಲ್ಲಿ ಮನೋ ವಿಶ್ಲೇಷಣಾತ್ಮಕ ಧೋರಣೆ : ಡಾ. ಎಂ. ಪ್ರಭಾಕರ ಜೋಶಿ

ಲೇಖಕರು : ಉದಯವಾಣಿ
ಭಾನುವಾರ, ಫೆಬ್ರವರಿ 23 , 2014
ಫ಼ೆಬ್ರವರಿ 23, 2014

ಯಕ್ಷಗಾನ ಕಲೆಯಲ್ಲಿ ಮನೋ ವಿಶ್ಲೇಷಣಾತ್ಮಕ ಧೋರಣೆ : ಡಾ. ಎಂ. ಪ್ರಭಾಕರ ಜೋಶಿ

ಪುತ್ತೂರು : ಯಕ್ಷಗಾನವು ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕಾಲಾನುಕಾಲಕ್ಕೆ ಬದಲಾವಣೆ ಅನಿವಾರ್ಯವಾದರೂ ಅದರ ಘನತೆಗೆ ದಕ್ಕೆಯಾಗಬಾರದು ಎಂದು ಬಹಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಹೇಳಿದರು.

ಕರ್ನಾಟಕ ಸಂಘದ ಮತ್ತು ಅನ್ಯಾನ್ಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅನುರಾಗ ವಠಾರದಲ್ಲಿ ನಡೆಯುತ್ತಿರುವ ಸಾಹಿತ್ಯ ಕಲಾ ಕುಶಲೋಪರಿಯ ಸಾಲ್ಮರ ಸ್ಕೋಪ್‌ ಕೌನ್ಸೆಲಿಂಗ್‌ ಹೋಮ್‌ ಸಂಯೋಜನೆಯಲ್ಲಿ ನಡೆದ 'ಯಕ್ಷ ಮನೋ ಚಿಂತನ ' ಕಾರ್ಯಕ್ರಮದಲ್ಲಿ ಯಕ್ಷಗಾನ ಕಲೆಯಲ್ಲಿ ಮನೋ ವಿಶ್ಲೇಷಣಾತ್ಮಕ ಧೋರಣೆ ವಿಷಯದ ಕುರಿತು ಅವರು ಮಾತನಾಡಿದರು.

ಕಲಾವಿದರನ್ನು ಎದುರು ಬದುರಾಗಿ ನೋಡುವಾಗ ಅವರು ತಮ್ಮ ಪಾತ್ರದ ವಿಶ್ಲೇಷಣೆಯನ್ನು ಮಾಡುವ ಕುರಿತು ಗಮನ ಕೊಡಬೇಕು ಎಂದ ಅವರು ಹಿಂದಿನ ಶಾಸ್ತ್ರಬದ್ಧವಾದ ಯಕ್ಷಗಾನವನ್ನು ಇಂದು ಬಿಂಬಿಸಲು ಸಾಧ್ಯವಿಲ್ಲ. ಯಕ್ಷಗಾನದಲ್ಲಿ ಹೊಸತು ಬರುವುದು ಸಾಮಾನ್ಯ ಎಂದರು. ಜಾನಪದ ಸಂಶೋಧಕ ಡಾ. ಸುಂದರ ಕೇನಾಜೆ ಪ್ರಾಸ್ತಾವಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್‌ ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಸ್ಕೋಪ್‌ ಕೌನ್ಸೆಲಿಂಗ್‌ ಹೋಮ್‌ನ ಗಂಗಾಧರ ಬೆಳ್ಳಾರೆ ಸ್ವಾಗತಿಸಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ ವಂದಿಸಿದರು. ಅಡಿಕೆ ಪತ್ರಿಕೆ ಸಂಪಾದಕ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು.

ಕೃಪೆ : http://www.udayavani.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ